
ಕರ್ನಾಟಕ ರಾಜ್ಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ನಡೆದು ಬಂದ ದಾರಿ
ಸನ್ 1987ನೇ ಇಸ್ವಿ ಹುಬ್ಬಳ್ಳಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ನೇತೃತ್ವದಲ್ಲಿ ಮೀಸಲಾತಿ ಹೋರಾಟದ ಸಂದರ್ಭ, ನಮ್ಮ ಸಮಾಜದ ಸರ್ವಾಂಗೀಣ ಅಭಿವೃದ್ದಿಗೊಸ್ಕರ ರಾಜ್ಯಮಟ್ಟದ ಸಂಸ್ಥೆಯ ಅವಶ್ಯಕತೆ ಹಾಗೂ ಅಗತ್ಯತೆಯನ್ನು ಮನಗಂಡ ಸಮಾಜದ ಹಿರಿಯರು ಮತ್ತು ಮುಖಂಡರುಗಳು ಹುಬ್ಬಳ್ಳಿ ಸಮಾಜದ ನೇತೃತ್ವದಲ್ಲಿ ಡಿಸೆಂಬರ 1988ರಲ್ಲಿ ಕರ್ನಾಟಕ ರಾಜ್ಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಸ್ಥಾಪನೆಯಾಯಿತು. ಹುಬ್ಬಳ್ಳಿ ಸಮಾಜದ ಬಂಧುಗಳು ಪ್ರಥಮ ಕಾರ್ಯಾವಧಿಯಲ್ಲಿ ಅಧಿಕಾರ ವಹಿಸಿಕೊಂಡು, ರಾಜ್ಯ ಸಂಸ್ಥೆಯ ಘಟನೆ ನೀತಿ-ನಿಯಮಾವಳಿಗಳನ್ನು ರಚಿಸಿ ಅಧಿಕೃತವಾಗಿ ಸಂಸ್ಥೆಯನ್ನು ನೊಂದಾಯಿಸಿದರು.
ನಮ್ಮ ಸಮಾಜವನ್ನು ಅತ್ಯಂತ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಗುರುತಿಸಲು ರಾಜ್ಯ ಸರಕಾರಕ್ಕೆ ವಿಸ್ತøತ ಮಾಹಿತಿಗಳನ್ನೊಳಗೊಂಡ ಮನವಿಯನ್ನು ನಮ್ಮ ಸಂಸ್ಥೆಯು ಸಲ್ಲಿಸಿದ ಫಲವಾಗಿ, ಕರ್ನಾಟಕ ರಾಜ್ಯ ಸರಕಾರವು 1994ರಲ್ಲಿ ನಮ್ಮ ಸಮಾಜವನ್ನು ಅತಿ ಹಿಂದುಳಿದ ಪ್ರವರ್ಗ-1 ರಲ್ಲಿ ಗುರುತಿಸಿತು. ರಾಜ್ಯ ಸರಕಾರ ನೀಡಿರುವ ಈ ಸೌಲಭ್ಯದಿಂದ ಸಮಾಜದ ಸಮಸ್ತ ಬಂಧು-ಭಗಿನಿಯರಿಗೆ ಶೈಕ್ಷಣಿಕವಾಗಿ ಹಾಗೂ ಸರಕಾರಿ ನೌಕರಿ ಪಡೆದುಕೊಳ್ಳಲು ಹೆಚ್ಚಿನ ಅನುಕೂಲವಾಗಿದೆ.
ಸಮಾಜದಲ್ಲಿಯ ಪಾಲಕರ ಅನುಕೂಲಕ್ಕೋಸ್ಕರ ದ್ವಿತೀಯಾವಧಿಯಲ್ಲಿ ದಿನಾಂಕ: 13-05-1995 ರಂದು ಪ್ರಥಮ ವಧು-ವರ ಮತ್ತು ಪಾಲಕರ ಸಮ್ಮೇಳನವು ಶಿವಮೊಗ್ಗದಲ್ಲಿ ನೆರವೇರಿತು. ಅದೇ ರೀತಿ ತೃತಿಯಾವಧಿಯಲ್ಲಿಯೂ 2ನೇ ವಧು-ವರ ಮತ್ತು ಪಾಲಕರ ಸಮ್ಮೇಳನವು ಡಾವಣಗೆರೆಯಲ್ಲಿ ದಿನಾಂಕ: 24- ಮತ್ತು 25 ಮೇ 2003 ರಲ್ಲಿ ಜರುಗಿತು. ಈ ಎರಡೂ ಸಮ್ಮೇಳನಗಳ ಲಾಭವನ್ನು ಸಮಾಜದ ಸಮಸ್ತ ಬಂಧು-ಭಗಿನಿಯರು ಪಡೆದುಕೊಂಡಿರುತ್ತಾರೆ. ಮತ್ತು ಇಂತಹ ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸಂಸ್ಥೆ ಸತತವಾಗಿ ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.
ಈ ನಡುವೆ ರಾಜ್ಯ ಸಂಸ್ಥೆಯ ತನ್ನ ಗಮನವನ್ನು ಶಿಕ್ಷಣ ಕ್ಷೇತ್ರಕ್ಕೂ ಹರಿಸಿ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಮೊದಲ ಹತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಗದು ಸ್ಕಾಲರಶಿಪ್‍ಗಳನ್ನು ನೀಡಲು ಪ್ರಾರಂಭಿಸಿತು. ಮುಂದುವರೆದು ಪಿ.ಯು.ಸಿ. ಮತ್ತು ಪಧವಿ ಪಡೆದ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿರುತ್ತೇದೆ. ಇದೇ ಪರಂಪರೆ ಇಂದಿಗೂ ಮುಂದುವರೆದಿರುತ್ತದೆ.
ಸಮಾಜದ ಬಂಧು-ಭಗಿನಿಯರನ್ನು ಸಂಘಟಿಸಲು ಅನೇಕ ಊರಿನ ಸ್ಥಾನಿಕ ಸಮಾಜಗಳಲ್ಲಿ ಸಂಪರ್ಕ ಸಭೆಗಳನ್ನು ಏರ್ಪಡಿಸಿ, ರಾಜ್ಯ ಸರಕಾರದಿಂದ ನಮ್ಮ ಸಮಾಜಕ್ಕೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿಗಳನ್ನು ನೀಡಲಾಗುತ್ತಿದೆ. ಇದಲ್ಲದೇ ಈ ಸಂಪರ್ಕ ಸಭೆಗಳಲ್ಲಿ ಸಾಂಸ್ಕøತಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ದಿ ಕುರಿತು ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಪುನಃ ಚತುರ್ಥ ಅವಧಿಯ ಕಾರ್ಯವನ್ನು ಹುಬ್ಬಳ್ಳಿ ಸಮಾಜವು ಡಿಸೆಂಬರ 2007 ರಲ್ಲಿ ವಹಿಸಿಕೊಂಡು ಕಾರ್ಯ ಪ್ರವೃತ್ತವಾಯಿತು. ಸಮಾಜದಲ್ಲಿಯ ವಿದ್ಯಾರ್ಥಿ-ವಿದ್ಯಾಥಿನಿಯರನ್ನು ಶೈಕ್ಷಣಿಕವಾಗಿ ಇನ್ನೂ ಹೆಚ್ಚು ಪ್ರೋತ್ಸಾಹಿಸಲು ಮತ್ತು ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ವಿಶಾಲ ತಳಹದಿಯಲ್ಲಿ ಶಿಕ್ಷಣ ನಿಧಿಯನ್ನು ಸ್ಥಾಪಿಸುವ ಪ್ರಶಂಸನೀಯ ನಿರ್ಧಾರವನ್ನು ಕೈಗೊಂಡು, ಶಿಕ್ಷಣ ನಿಧಿಯ ಅಗತ್ಯತೆಯನ್ನು ಸಮಾಜದ ಶಿಕ್ಷಣ ಪ್ರೇಮಿಗಳಲ್ಲಿ ಹಾಗೂ ದಾನಿಗಳಲ್ಲಿ ಮನಗಾಣಿಸಿ ಅಲ್ಪಾವಧಿಯಲ್ಲಿಯೇ ಸುಮಾರು ಮೂರು ಲಕ್ಷ ಅರವತ್ತು ಸಾವಿರ ರೂಪಾಯಿಗಳ ದೇಣಿಗೆಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಹೀಗೆ ದೇಣಿಗೆ ಸಂಗ್ರಹ ಕಾರ್ಯ ನಿರಂತರವಾಗಿ ಸಾಗಲಿದೆ. ಶಿಕ್ಷಣ ಅಭಿಮಾನಿಗಳು ಶಿಕ್ಷಣ ನಿಧಿಗೆ ತಮ್ಮ ಪ್ರೀತಿ ಪಾತ್ರರ ಸ್ಮರಣಾರ್ಥ ಹೆಚ್ಚಿನ ದೇಣಿಗೆ ನೀಡಿ ಸಹಕರಿಸಲು ಸಂಸ್ಥೆ ಸಮಾಜದ ಸಮಸ್ತ ಬಂದು-ಭಗಿನಿಯರನ್ನು ಕೋರಿದೆ.
ಶೈಕ್ಷಣಿಕವಾಗಿ ನಮ್ಮ ಸಮಾಜವನ್ನು ಅಭಿವೃದ್ದಿಪಡಿಸಲು ಶೈಕ್ಷಣಿಕ ಸಂಘಟನೆಯನ್ನು (ಇಜuಛಿಚಿಣioಟಿಚಿಟ Soಛಿieಣಥಿ) ಹುಟ್ಟುಹಾಕಲು ಈಗಾಗಲೇ ನಿರ್ಧರಿಸಲಾಗಿದೆ. ಸಂಘಟನೆಯ ರೂಪ-ರೇಷೆಗಳ ಕಾರ್ಯ ಪ್ರಗತಿ ಪಥದಲ್ಲಿದೆ. ನಮ್ಮ ಸ್ಥಾನಿಕ ಸಮಾಜಗಳನ್ನು ಶಿಸ್ತು ಬದ್ದವಾಗಿ ಸಂಘಟಿಸಲು, ನಿರ್ವಹಿಸಲು ಪ್ರಸ್ತುತ ಸ್ಥಾನಿಕ ಸಮಾಜಗಳ ಸಂಘಟನೆ, ನಿರ್ವಹಣೆ ಮತ್ತು ರಾಜ್ಯ ಸಂಸ್ಥೆಯ ಜೊತೆ ಸಂಬಂಧ ಈ ವಿಷಯದ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಸಮಾಜದ ಸರ್ವಂಗೀಣ ಪ್ರಗತಿಯ ಕುರಿತು ಹಾಗೂ ಶಿಸ್ತುಬದ್ದ ಸಂಘಟನೆಯ ಕುರಿತು ವಿಸ್ತ್ರುತ ಮಾಹಿತಿ ನೀಡಿ ಚರ್ಚಿಸಲು ಅವಕಾಶ ಒದಗಿಸಲಾಗಿದೆ.
ಮುಂದುವರೆದು ಸನ್ 2014ರಲ್ಲಿ ರಾಜ್ಯ ಸಂಸ್ಥೆಯನ್ನು ಮುಂದಿನ ಅವಧಿಗೆ ಮುನ್ನಡೆಸಿಕೊಂಡು ಹೋಗಲು ಸರ್ವ ಸದಸ್ಯರ ಸಮ್ಮತಿಯಿಂದ ಬಾಗಲಕೋಟೆ ಸ್ಥಾನಿಕ ಸಮಾಜಕ್ಕೆ ಹಸ್ತಾಂತರಿಸಲಾಯಿತು. ನಂತರ ದಿನಾಂಕ: 17-06-1989ರಂದು ಬಾಂಬೆ ಪಬ್ಲಿಕ ಟ್ರಸ್ಟ್ ಎಕ್ಟ್ 1950 (ಃom ಘಿಘಿIಘಿ oಜಿ 1950) ಅಡಿ ನೊಂದಾಯಿಸಲ್ಪಟ್ಟಿದ್ದ ಕಾನೂನು ನಿರಶನಗೊಂಡಿದ್ದರಿಂದ ಸಂಸ್ಥೆಯನ್ನು ಪುನಃ ದಿನಾಂಕ: 08-08-2016ರಂದು ನೋಂದಣಿ ಸಂಖ್ಯೆ: ಸಂ.ನೋ.ರಾ/45/2016-17 ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1966ರ ಮೇರೆಗೆ ಸಂಸ್ಥೇಯನ್ನು ಪುನರ್‍ನೋಂದಣಿ ಮಾಡಲಾಯಿತು.
ದಿನಾಂಕ: 11 ಮತ್ತು 12 ಅಕ್ಟೋಬರ 2014ರಂದು ಗಂಜಾಂ ಗ್ರಾಮದಲ್ಲಿ ಕುಲದೇವತೆ ಶ್ರೀ. ನಿಮಿಷಾಂಬಾ ದೇವಿ ಸನ್ನಿದಿಯಲ್ಲಿ ರಾಜ್ಯ ಸಂಸ್ಥೆಯ ವಿಶೇಷ ಸರ್ವ ಸಾಧಾರಣ ಸಭೆ ಆಯೋಜಿಸಲಾಯಿತು. ಸದರಿ ಸಭೆಯಲ್ಲಿ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದುರು. ಸದರಿ ಸಭೆಯಲ್ಲಿ ಮುಖ್ಯವಾಗಿ ಸಮಾಜ ಬಾಂಧವರಲ್ಲಿ ಉತ್ತಮ ಶಿಕ್ಷಣದ ಮೂಲಕ ಜ್ಞಾನಾರ್ಜನೆ, ನೈತಿಕ ಸ್ತೈರ್ಯ ಸಂಸ್ಕಾರ, ಧಾರ್ಮಿಕ ಮನೊಭಾವನೆ, ಉದ್ಯೋಗದಲ್ಲಿ ಸ್ವಾವಲಂಬನೆ, ಸಮಾಜಸೇವೆ ಮತ್ತು ಅರ್ಹರಿಗೆ ನೆರವಾಗುವ ಸಹಾಯ ಮಾಡುವ ಮನೊಭಾವ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆ ಪಾತ್ರ ತುಂಬಾ ಮುಖ್ಯವಾಗಿದ್ದು ಮನಗಂಡು ರಾಜ್ಯ ಸಂಸ್ಥೆಯ ವತಿಯಿಂದ ಒಂದು ಸುಸಜ್ಜಿತವಾದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ದೃಡ ಸಂಕಲ್ಪ ಮಾಡಿ ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಯಿತು. ಸದರಿ ಸಭೆಯಲ್ಲಿ ರೂ. 1,00,000/- ದೇಣಿಗೆ ಸಂದಾಯ ಮಾಡಿ ವಂಶಪಾರಂಪರ್ಯ ಸದಸ್ಯತ್ವವನ್ನು ಪಡೆದುಕೊಳ್ಳಲು 35 ಜನ ವಾಗ್ದಾನ ಮಾಡಿದರು. ಇದರಲ್ಲಿ 6 ಜನ ಸದಸ್ಯರು ತಮ್ಮ ವಾಗ್ದಾನ ಮೊತ್ತವನ್ನು ಸಂದಾಯ ಮಾಡಿದ್ದಾರೆ.
ಅಲ್ಲದೆ ಸದರಿ ರಾಜ್ಯಸಂಸ್ಥೆಗೆ ಒಂದು ಶಾಸ್ವತವಾದ ಸ್ಥಾನವನ್ನು/ನಿವೇಶನವನ್ನು ಹೊಂದಲು ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದಲ್ಲಿ ಬೆಂಗಳೂರು-ಮೈಸುರು ಎನ್.ಎಚ್. ರೋಡಿಗೆ ಹೊಂದಿಕೊಂಡು ಸುಮಾರು 10 ಗುಂಟೆ ಜಮೀನನ್ನು ಸುಮಾರು ರೂ. 70,00,000/- (ಎಪ್ಪತ್ತು ಲಕ್ಷ) ರೂ.ಗಳ ವೆಚ್ಚದಲ್ಲಿ ಖರೀದಿ ಮಾಡಲು ನಿರ್ದರಿಸಿ ಖರೀದಿ ಕರಾರು ಪತ್ರವನ್ನು ಮಾಡಲಾಗಿದೆ. ಸದರಿ ನಿವೇಶನದಲ್ಲಿ ಶ್ರೀ. ನಿಮಿಷಾಂಬಾ ದೇವಿ ದರ್ಶನಕ್ಕೆ ಆಗಮಿಸುವ ಸಮಾಜ ಭಾಂದವರ ಅನಕೂಲಕ್ಕಾಗಿ ಸುಸಜ್ಜಿತವಾದ ಯಾತ್ರಿ ನಿವಾಸ, ಸಮುದಯ ಭವನ ಮತ್ತು ಹೆಚ್ಚಿನ ಆದಾಯಕ್ಕಾಗಿ ವಾಣಿಜ್ಯ ಸಂಕಿರ್ಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಸದರಿ ಯೋಜನೆಗೆ ದಾಣಿಗಳಿಂದ ಉತ್ತಮ ಸಹಕಾರ ದೊರೆಯುತ್ತಿದ್ದು, ಕಾರ್ಯ ಪ್ರಗತಿಯಲ್ಲಿದೆ.
Karnataka State Somavamsha Arya Kshatriya
Welcome to Karnataka State Somavamsha Arya Kshatriya, a page which provides us with a wide range of information about the origins of our community. The KRSAK page is founded with the aim of the promotion of the religious, social, educational and cultural exchange between the KRSAK people of Karnataka State.
Its main goals are to unite, preserve, protect and promote social, economic and educational contacts of Samaj Members Residing. These goals would be best achieved by bringing everyone together, by establishing communication and bonding the SAK Samaj & that is the reason, here we have our own page to communicate with our people more efficiently. This article is presented to familiarize young readers to our ancestors Arya Maharaj.
Karnataka State Somavamsha Arya Kshatriya
Here we briefly explain about the origin and history of our Somavamsha Arya Kshatriya (SAK) community. Somavamsha / Chandravamsha Kshatriyas are one of the three main Kshatriya Vamshas Social Class in India, the others being Sahasra Vamsha and Agni Vamsha. They are direct descendants of Som(Moon). As the name “SOM” indicates, this community belongs to the Lunar Dynasty. The word “Somavamsha Kshatriya” means the second caste in the hierarchy of the Hindu Varna System. “Soma” means “Moon”, thus these Kshatriyas belong to the “Chandra Vamsha” i.e. “Moon Dynasty of Warriors”.
His name is part of our community acronym Somavamsha Arya Kshatriya (SSK). It is a common understanding among the SAKians that the name Arya refers to emperor Arjun, who possessed a thousand hands. These hands were blessed by God Dattatreya for his deep devotion. His dedication to protect the poor and weak subjects, from the social outcasts or adharmies. The word Arya virtually means a thousand.
The Sanskrit word Arya is a surname and a masculine (आर्य ārya) and feminine (आर्या āryā) given name, signifying "honorable" or "noble". In India and Iran it is a popular masculine given name and a popular surname. There are other explanations on the expression of strength of Arya in the form of fables and mythical tales. It is the subject of this article. The illustrations presented here are designed in the interest of youngsters, who have little or no direct contact with the main core of SAK community. However, for reading the text the parent’s guidance may be required. Hopefully it will arouse curiosity in them over the glories of our past.
Karnataka State Somavamsha Arya Kshatriya
In the context of the reservation struggle under the leadership of Hubballi Somavamsa Arya Kshatriya Samaj in 1987, the elders and leaders of the society realized the need and need of a state level organization for the overall development of our society and the Karnataka State Somavamsa Arya Kshatriya Samaj was established in December 1988 under the leadership of Hubli Samaj.
The brothers of the Hubli Samaj took charge in the first term and officially registered the organization by drafting the rules and regulations of the state organization.
As a result of our organization submitting a petition containing detailed information to the State Government to recognize our society in the Most Backward Class list, the Karnataka State Government recognized our society in Most Backward Category-1 in 1994. With this facility provided by the state government, all the brothers and sisters of the society are more benefited in getting educational and government jobs.