
ಅಧ್ಯಕ್ಷರು, ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ರಿ., __________________________ ವಿಷಯ:- ಕರ್ನಾಟಕ ರಾಜ್ಯ ಸೋ.ಆ.ಕ್ಷ ಸಮಾಜ ರಿ. ಸಂಸ್ಥೆಗೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್‍ದಲ್ಲಿ ನಿವೇಶನ ಖರೀದಿಸುವ ಕುರಿತು. --:-- ಮಾನ್ಯರೆ, ಮಾನ್ಯರೆ, ತಮಗೆ ತಿಳಿದಿರುವಂತೆ 1989ರಲ್ಲಿ ರಾಜ್ಯಾದ್ಯಂತ ಮೀಸಲಾತಿಯ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿ ಸಮಾಜದ ನೇತ್ರತ್ವದಲ್ಲಿ ನಮ್ಮ ಸಮುದಾಯದ ಎಲ್ಲ ಸ್ಥಾನಿಕ ಸಮಾಜಗಳ ಸಹಕಾರದಿಂದ, ನಮ್ಮ ಸಮುದಾಯದ ಉನ್ನತಿಗೆ, ಸಮಾಜದ ಸಂಘಟನೆಯೊಂದಿಗೆ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಬಡಜನರಿಗೆ ಸಹಾಯ ಸಹಕಾರ ನೀಡಿ ಅವರ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಿ, ಸಮಾಜದ ಮುಖ್ಯವಾಹಿನಿಗೆ ಕರೆತರುವ, ವಿವಿಧ ಸಮಾಜ ಕಲ್ಯಾಣ ಕಾರ್ಯಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಸ್ಥಾಪನೆಯಾದ ಕರ್ನಾಟಕ ರಾಜ್ಯ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ, ಒಂದು ನೊಂದಾಯಿತ ಸಂಸ್ಥೆಯಾಗಿದೆ. ಸದರಿ ಈ ಸಂಸ್ಥೆಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದೊಂದಿಗೆ ಸಾಕಷ್ಟು ಹೋರಾಟ ಮಾಡಿ ಈ ನಮ್ಮ ಸಮಾಜ, ಹಿಂದುಳಿದ ಪ್ರವರ್ಗ-1ರಲ್ಲಿ ಸೇರ್ಪಡೆಯಾಗಿಸುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ನಮ್ಮ ಸಮಾಜದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಮ್ಮ ವಿದ್ಯಾಭ್ಯಾಸ, ಉನ್ನತ ವ್ಯಾಸಂಗ, ಸರ್ಕಾರಿ ನೌಕರಿ, ಸೌಲಭ್ಯಗಳನ್ನು ಪಡೆಯಲು ತುಂಬಾ ಸಹಕಾರಿಯಾಗಿದೆ. ಇಂತಹ ಒಂದು ಮಹತ್ಕಾರ್ಯ ಮಾಡಿದ ರಾಜ್ಯ ಸಂಸ್ಥೆಗೆ ನಾವೆಲ್ಲಾ ಚಿರ ಋಣಿಯಾಗಿರಬೇಕಾಗುತ್ತದೆ. ಮತ್ತು ಅದನ್ನು ಪೋಷಿಸಿ ಬೆಳೆಸಿ ಈ ನಮ್ಮ ಜನಾಂಗದ ಮುಂದಿನ ಪೀಳಿಗೆಗೆ ಬಳುವಳಿಯಾಗಿ ವಹಿಸುವದು ಅತ್ಯಂತ ಅವಶ್ಯಕವಾಗಿದೆ. ದಿನಾಂಕ: 02-02-2014ರಲ್ಲಿ ಇಂಥ ಒಂದು ಪ್ರತಿಷ್ಟೀತ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿಯುವ ಅವಕಾಶ ನಮ್ಮ ಬಾಗಲಕೋಟೆ ಸಮಾಜಕ್ಕೆ ಒದಗಿದ್ದು, ಅದು ಕೇವಲ 3 ವರ್ಷ ಅವಧಿಯದ್ದಾಗಿತ್ತು. ಈ ಸಂಸ್ಥೆಗೆ ರಾಜ್ಯಾದ್ಯಂತ ಎಲ್ಲ ಸ್ಥಾನಿಕ ಸಮಾಜದ ಸಂಸ್ಥೆಯವರು, ದಾನಿಗಳು ಮತ್ತು ಹಿತೈಷಿಗಳ ಸಹಾಯ ಸಹಕಾರದಿಂದಾ ಅತ್ಯುತ್ತಮ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನಡೆಸಿದರ ಫಲವಾಗಿ ಸದರಿ ಸಂಸ್ಥೆಯನ್ನು ಸತತ ಎರಡು ಅವಧಿಗಳನ್ನು ಪೂರೈಸಿ, 3ನೇ ಅವಧಿಯನ್ನು ಪೂರ್ತಿಯಾಗಿಸುವ ಹಂತದಲ್ಲಿದ್ದೇವೆ. ಈ ನಮ್ಮ ಅವಧಿಯಲ್ಲಿ ಸುಮಾರು 15 ಲಕ್ಷದವರೆಗೆ ಹಣವನ್ನು ಶೇಖರಣೆ ಮಾಡಿ ಸಂಸ್ಥೆಯನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಅಳಿಲು ಸೇವೆಯನ್ನು ಮಾಡಿದ್ದೇವೆ. ಸದರಿ ಈ ರಾಜ್ಯ ಸಂಸ್ಥೆಯನ್ನು ನಿರ್ವಹಿಸಿ ಸಂಪರ್ಕದಲ್ಲಿ ಈ ನಮ್ಮ ಬಾಗಲಕೋಟೆ ಸಮಾಜ ಕೂಡಾ ಅತ್ಯಂತ ಸಮೃದ್ದಿಯಾಗಿ ಬೆಳೆದಿದೆ ಎಂದು ಹೇಳಲಿಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ಇಂಥ ಈ ಒಂದು ಪ್ರತಿಷ್ಠಿತ ಸಂಸ್ಥೆಗೆ ಶಾಶ್ವತವಾದ ಸ್ಥಾನವನ್ನು ಕಲ್ಪಿಸಲು ಇದಕ್ಕೆ ಒಂದು ಒಳ್ಳೆಯ ನಿವೇಶನವನ್ನು ಹೊಂದುವದು ಅತ್ಯಂತ ಅವಶ್ಯಕವಾಗಿದ್ದು ಈ ವಿಚಾರದಲ್ಲಿರುವಾಗ ಶ್ರೀ. ಟಿ. ಪ್ರಕಾಶರಾವ. ಗಂಜಾಮ್. ಇವರು ತಮ್ಮ ಬೆಳೆಬಾಳುವ ಜಮೀನು ಯೋಗ್ಯ ಬೆಲೆಗೆ ರಾಜ್ಯ ಸಂಸ್ಥೆಗೆ ನೆಲೆಯೂರಲಿಕ್ಕೆ ಕೊಡುವ ಪ್ರಸ್ತಾಪ ಮಾಡಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಏಕೆಂದರೆ ಈ ನಮ್ಮ ಸಮುದಾಯದ ಕುಲದೇವತೆ ಶ್ರೀ. ನಿಮಿಷಾಂಬಾ ದೇವಿ ನೆಲೆಸಿರುವ ಗಂಜಾಮ್ ಗ್ರಾಮದಲ್ಲೆ ರಾಜ್ಯ ಸಂಸ್ಥೆಗೆ ಶಾಶ್ವತವಾದ ನೆಲೆ ಕಲ್ಪಿಸಿದಂತಾಗುತ್ತದೆ. ಮತ್ತು ಸಂಸ್ಥೆಗೆ ನಿವೇಶನ ವಿದ್ದರೆ ನಿವೇಶನದ ಎಲ್ಲ ಅಭಿವೃದ್ದಿಗೆ ಸರ್ಕಾರದಿಂದ ಎಲ್ಲ ರೀತಿಯ ಅನುದಾನ ಪಡೆಯಲು ಅರ್ಹರಾಗುತ್ತೇವೆ ನಮ್ಮ ಬಾಗಲಕೋಟೆ ಸ್ಥಾನಿಕ ಸಮಾಜಕೂಡಾ ಸರ್ಕಾರದ ಅನುದಾನದಿಂದಲೆ ಸುಸಜ್ಜಿತವಾದ ಸಾಂಸ್ಕøತಿಕ ಭವನ ನಿರ್ಮಿಸಿದ್ದು ತಮಗೆಲ್ಲ ತಿಳಿದ ವಿಷಯವಾಗಿದೆ. ಕಾರಣ ತಾವು ಸೋಮವಂಶ ಆರ್ಯ ಕ್ಷತ್ರೀಯ ಸ್ಥಾನಿಕ ಸಮಾಜದಿಂದ ನಿವೇಶನ ಖರೀದಿಗೆ ಆರ್ಥಿಕ ಸಹಾಯ ಮಾಡಿದಲ್ಲಿ, ಸರ್ಕಾರದ ಅನುದಾನ ಪಡೆದು ಅಲ್ಲಿ ಒಂದು ಸುಸಜ್ಜಿತವಾದ ಯಾತ್ರಿನಿವಾಸ, ಸಮುದಾಯ ಭವನ ಹಾಗೂ ಹಾಸ್ಟೇಲ ಕೂಡಾ ನಿರ್ಮಿಸಿ ದೇಶಾದ್ಯಂತ ಎಲ್ಲ ಭಾಗಗಳಿಂದಾ ಶ್ರೀ. ನಿಮಿಷಾಂಬಾ ದೇವಿ ದರ್ಶನಕ್ಕೆ ಬರುವ ಎಲ್ಲ ನಮ್ಮ ಸಮಾಜ ಬಾಂಧವರಿಗೆ ಅನುಕೂಲ ವಾಗುತ್ತದೆ. ಅಲ್ಲದೇ ಇದರಿಂದಾ ಬರುವ ಆದಾಯದಿಂದಾ ನಮ್ಮ ಸಮಾಜದ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಆರ್ಥಿಕ ಸಹಾಯ ಕೂಡ ಮಾಡಬಹುದು ಅಲ್ಲದೆ ಹೆಚ್ಚಿನ ಆದಾಯವಾದರೆ ನಮ್ಮ ಸಮುದಾಯದಿಂದ ಒಂದು ಶಿಕ್ಷಣ ಸಂಸ್ಥೆಯನ್ನು ಕೂಡಾ ಆರಂಭಿಸಲು ಯೋಚಿಸಲಾಗಿದೆ. ಇಂಥ ಸತ್ಕಾರ್ಯಕ್ಕಾಗಿ ತಮ್ಮ ಸ್ಥಾನಿಕ ಸಮಾಜದಿಂದ ನಿಗಧಿತ ನಿವೇಶನ ಖರೀದಿಸಲು ಸಹಾಯ ಸಹಕಾರ ನೀಡಿದಲ್ಲಿ ಸಂಸ್ಥೆಯು ಸಧೃಡವಾಗಿ ಬೆಳೆದು ನಿಲ್ಲುವಲ್ಲಿ ಸಹಕಾರಿಯಾಗುತ್ತದೆ. ಧನ್ಯವಾದಗಳೊಂದಿಗೆ, ಸ್ಥಳ : ಬಾಗಲಕೋಟೆ ದಿನಾಂಕ: 08-05-2022